ಡಯಬೇಸ್
ಡಾಲರೈಟ್ ಮತ್ತು ಬೆಸಾಲ್ಟ್ ಶಿಲೆಗಳಂತೆಯೇ ಪ್ಲೇಜಿಓಕ್ಲೇಸ್ ಮತ್ತು ಪೈರಕ್ಸೀನ್ ಖನಿಜಗಳಿಂದ ಕೂಡಿದ ಅಚ್ಚಕಪ್ಪು ಬಣ್ಣದ ಒಂದು ಅಗ್ನಿಶಿಲೆ. ಇದಕ್ಕೆ ಸಾಮಾನ್ಯವಾಗಿ ಸೂಕ್ಷ್ಮವಾದ ಅಥವಾ ಕೊಂಚ ದಪ್ಪವಾದ ಖನಿಜಕಣಗಳಿಂದ ಕೂಡಿದ ವಿನ್ಯಾಸ ಉಂಟು. ಡಾಲರೈಟ್ ಶಿಲೆಯನ್ನೇ ಡಯಬೇಸ್ ಎಂದೂ ಕರೆಯುವುದಿದೆ. ಅಮೆರಿಕದ ಸಂಯುಕ್ತ ಸಂಸ್ಥಾನದಲ್ಲಿ ಪ್ಲೇಜಿಯೋಕ್ಲೇಸ್ ಮತ್ತು ಪೈರಾಕ್ಸೀನ್ ಖನಿಜಗಳ, ಹೆಣೆದುಕೊಂಡಿರುವ ವಿನ್ಯಾಸವುಳ್ಳ ಮತ್ತು ಡೈಕ್ ಮತ್ತು ಸಿಲ್‍ಗಳೋಪಾದಿಯಲ್ಲಿ ತೋರಿಬರುವ ಎಲ್ಲ ಶಿಲೆಗಳನ್ನೂ ಡಯಬೇಸ್ ಎಂದೇ ಕರೆಯುತ್ತಾರೆ, ಬೆಸಾಲ್ಟ್ ಮತ್ತು ಡಾಲರೈಟುಗಳ ಶಿಥಿಲೀಕರಣಗಳಿಂದ ಹಾರನ್‍ಬ್ಲೆಂಡ್, ಕ್ಲೋರೈಟ್, ಜೋóಯಿಸೈಟ್ ಮತ್ತು ಅಲ್‍ಬೈಟ್ ಮೊದಲಾದ ಹೊಸ ಖನಿಜಗಳು ಡಯಬೇಸ್‍ನಲ್ಲಿ ಕಂಡುಬರುವುದು ಉಂಟು. ಇತ್ತೀಚೆಗೆ ಶಿಥಿಲೀಕರಣಕ್ಕೊಳಗಾಗಿರುವ ಡಾಲರೈಟ್ ಮತ್ತು ಬೆಸಾಲ್ಟ್‍ಗಳಿಗೆ ಮಾತ್ರ ಡಯಬೇಸ್ ಪದವನ್ನು ಬಳಸುತ್ತಾರೆ.
(ಎಸ್.ಕೆ.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ